ದ.ರಾ.ಬೇಂದ್ರೆ ಯವರ ಜನ್ಮ ದಿನಾಚರಣೆ ವರದಿ


"ಬಿ" ಕಾಟೀಹಳ್ಳಿ ಹಾಸನ
ದಿನಾಂಕ 31/12/2021
ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ದ,ರಾ,ಬೇಂದ್ರೆ ಅವರ "ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಮಾರಿ ಜನಿಷಿಯಾ, ವ್ಯವಹಾರ ಶಾಸ್ತ್ರದ ಉಪನ್ಯಾಸಕರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಶ್ರೀಯುತ ದಿನೇಶ್ ಎಂ ಗಾವಂಕರ್ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ, ಬೇಂದ್ರೆಯವರ. ಬದುಕು ಮತ್ತು ಬರಹಗಳನ್ನು ಮೆಲುಕು ಹಾಕಿದರು. ಕನ್ನಡದ ವರ ಕವಿ, ಚಿರ ಕವಿಯ ಸಾಹಿತ್ಯದ ಪರಿಚಯ ಮಾಡಿಕೊಟ್ಟರು. ಬೇಂದ್ರೆ ವಿರಚಿತ ಕವನ ವಾಚಿಸಲಾಯಿತು. ಹಾಗೂ ಭಾವಗೀತೆ ಗಳನ್ನು ಹಾಡಲಾಯಿತು. ಕನ್ನಡ ಉಪನ್ಯಾಸಕರಾದ ಶ್ರೀಯುತ ರಂಗೇಗೌಡ ಡಿ. ಬಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ದ.ರಾ.ಬೇಂದ್ರೆ ಯವರ ಜನ್ಮ ದಿನಾಚರಣೆ ವರದಿ.